Nannavane (my man)..
Today is the day Sri and I met 6 years ago. Wanted to do something special for that and thought of writing a poem. But when it comes to Sri, I have written so many poems that its very difficult to think of a non-repeating matter :-D. So well, I decided to write in Kannada this time. Its been a long time since I wrote a Kannada poem (probably more than 10-12 years back) and I have never written one for my blog, somehow never wanted to. Well, better late than never. I tried my level best to translate it into English but the feelings weren't being expressed as good, so this one is specially for the Kannada knowing readers of my blog :). You know who it is dedicated to :).
ನನ್ನವನೆ...
ಕನಸಿನ ನಾನಾ ಗೋಜಲುಗಳಿಂದ
ನನಸಾಗಿ ಇಳಿದು ಬಂದವನೆ.
ಮನಸಿನ ಕವಿತೆಯಲಿ ಬೆರೆತು ಅರಿತು
ಬಯಕೆ ಹೂಗುಚ್ಛವ ತಂದವನೆ.
ಮೆಲ್ಲನೆ ಮಾತಲಿ ಎಳೆದು ಸೆಳೆದು
ಹೃದಯದ ಬಾಗಿಲ ತೆರೆದವನೆ.
ಸಲ್ಲದ ನಾಚಿಕೆಯ ಬಂಧವ ಕಡಿದು
ಕೈಯಲ್ಲಿ ಕೈ ಹಿಡಿದು ಮೆರೆದವನೆ.
ಆತಂಕ ಆವೇಶಗಳ ಬಡೆದೋಡಿಸಿ
ನನ್ನೆದೆಯಲಿ ಪ್ರೀತಿಯ ಹಡೆದವನೆ.
ಸಂತಸ ದುಃಖಗಳ ಸಪ್ತಪದಿಯನ್ನು
ಹೆಜ್ಜೆಗೆ ಹೆಜ್ಜೆ ಇಟ್ಟು ನಡೆದವನೆ.
ನೋವು ನಲಿವಲ್ಲಿ ಬಾಳ ಸಂಗಾತಿಯಾದ
ಪ್ರಾಣ ಸ್ನೇಹಿತನು ನೀನವನೆ.
ಜೀವನದ ಅನೇಕ ಆಶ್ಚರ್ಯಗಳಲಿ
ನನ್ನ ಪಾಲಿನ ವಿಸ್ಮಯ ನನ್ನವನೆ.
1 Comment:
Vanditha retorted...
good one!! Happy 6th first meeting anniversary :D
Wanna retort?